Home Actress Shilpa Manjunath Instagram Photos and Posts – April 2018 Shilpa Manjunath Instagram - #neevukaremadidachandadararu Press meet Pc: @chitrataramanu

Shilpa Manjunath Instagram – #neevukaremadidachandadararu Press meet Pc: @chitrataramanu

Shilpa Manjunath Instagram - #neevukaremadidachandadararu Press meet Pc: @chitrataramanu

Shilpa Manjunath Instagram – #neevukaremadidachandadararu
Press meet

Pc: @chitrataramanu | Posted on 19/Mar/2018 20:30:18

Shilpa Manjunath Instagram – They say “SIDIMIDI” .
Im sry.. i cannot be diplomatic.. 😐
#Vijayavani #kannadamovies #neevukaremadidachandadararu

ಕನ್ನಡದಲ್ಲಿ ಸಿನಿಮಾ ಅವಕಾಶಗಳು ಕಡಿಮೆ. ಆ ಒಂದೇ ಕಾರಣಕ್ಕೆ ಪರಭಾಷೆಯತ್ತಲೂ ಒಮ್ಮೊಮ್ಮೆ ಮುಖ ಮಾಡಬೇಕಾಗುತ್ತದೆ’- ಹೀಗೆ ಕೊಂಚ ಬೇಸರದಿಂದಲೇ ಹೇಳಿಕೊಂಡಿದ್ದು ಬಹುಭಾಷಾ ನಟಿ ಶಿಲ್ಪಾ ಮಂಜುನಾಥ್. ಮೂಲತಃ ಕನ್ನಡದವರಾದರೂ ತಮಿಳು, ಮಲಯಾಳಂ ಸಿನಿಮಾಗಳ ಮೂಲಕ ಶಿಲ್ಪಾ ಗುರುತಿಸಿಕೊಂಡಿದ್ದಾರೆ. ಕನ್ನಡದಲ್ಲಿ ‘ಸ್ಟ್ರೈಕರ್’, ‘ನೀವು ಕರೆ ಮಾಡಿದ ಚಂದಾದಾರರು’ ಸಿನಿಮಾಗಳ ಕೆಲಸಗಳನ್ನು ಮುಗಿಸಿಕೊಂಡಿದ್ದಾರೆ. ಪರಭಾಷೆಯ ಹಲವು ಅವಕಾಶಗಳೂ ಶಿಲ್ಪಾ ಖಾತೆಯಲ್ಲಿವೆ. ಆದರೆ ಅವರ ವಾದವೇ ಬೇರೆ! ‘ಕನ್ನಡದಲ್ಲಿ ಅನುಭವಿ ಕಲಾವಿದರಿಗಿಂತ ಅನಾನುಭವಿ ಕಲಾವಿದರಿಗೆ ಹೆಚ್ಚಿನ ಅವಕಾಶಗಳನ್ನು ನೀಡಲಾಗುತ್ತಿದೆ. ಅನುಭವಿ ಕಲಾವಿದೆಯ ಸಿನಿಮಾ ಸೋತರೆ, ಅವಳನ್ನು ನೋಡುವ ರೀತಿಯೇ ಬೇರೆ. ಇಂಡಸ್ಟ್ರಿಯಲ್ಲಿ ಗೆದ್ದೆತ್ತಿನ ಬಾಲ ಹಿಡಿದಂತೆ, ಕೆಲವೊಂದಿಷ್ಟು ಮುಖಗಳಿಗೆ ಮಾತ್ರ ಮಣೆ ಹಾಕಲಾಗುತ್ತಿದೆ. ಹಿಟ್ ನಟಿ ಎಂಬ ಕಾರಣಕ್ಕೆ ಅವರಿಗೆ ಮೇಲಿಂದ ಮೇಲೆ ಪ್ರಯೋಗಾತ್ಮಕ ಪಾತ್ರ ನೀಡುತ್ತಾರೆ. ಹಾಗಂತ ಅವಕಾಶ ಕೊಡುವುದು ತಪು್ಪ ಅಂತಲೂ ಹೇಳುತ್ತಿಲ್ಲ. ಬೇರೆ ನಟಿಯರೂ ಇದ್ದಾರೆ. ಅವರನ್ನು ನೋಡಲಿ ಎಂಬುದು ನನ್ನ ಮಾತಿನ ಉದ್ದೇಶ’ ಎಂದು ಕಡ್ಡಿ ಮುರಿದಂತೆ ಉತ್ತರಿಸುತ್ತಾರೆ ಶಿಲ್ಪಾ. ಅವರ ಪ್ರಕಾರ, ತಮಿಳು-ತೆಲುಗು ಚಿತ್ರರಂಗಕ್ಕೆ ಹೋಲಿಕೆ ಮಾಡಿದರೆ ಸ್ಯಾಂಡಲ್​ವುಡ್​ನಲ್ಲಿ ಗ್ಲಾಮರ್​ಗೆ ಹೆಚ್ಚು ಮಹತ್ವ ನೀಡುತ್ತಾರಂತೆ. ಇನ್ನು, ಪಾತ್ರಗಳ ಆಯ್ಕೆ ಬಗ್ಗೆಯೂ ಶಿಲ್ಪಾ ತುಂಬ ಚ್ಯೂಸಿ. ‘ನನಗೆ ಸಂಬಂಧವಿಲ್ಲದ ಪಾತ್ರಗಳಿಗಾಗಿ ನಾನು ಹುಡುಕಾಡುತ್ತೇನೆ. ಅದೇ ನನಗೆ ಚಾಲೆಂಜಿಂಗ್. ಆದರೆ ಆ ರೀತಿಯ ಪಾತ್ರ ನಮ್ಮಂಥವರಿಗೆ ಸಿಗುವುದು ತೀರಾ ವಿರಳ’ ಎನ್ನುವ ಶಿಲ್ಪಾ ಸದ್ಯ ತಮಿಳಿನಲ್ಲಿ ಸಿದ್ಧವಾಗುತ್ತಿರುವ ‘ಇಸ್ಪಿಟ್ ರಾಜ್ ಹೃದಯಾ ರಾಣಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರದಲ್ಲಿ ಅವರಿಗೆ ಗಟ್ಟಿ ಪಾತ್ರ ಸಿಕ್ಕಿದೆಯಂತೆ. ‘ಕಾಳಿ’ ಸಿನಿಮಾ ಸಹ ಪೂರ್ಣಗೊಂಡಿದ್ದು, ಏ.14ರಂದು ಬಿಡುಗಡೆಯಾಗಲಿದೆ. ಕನ್ನಡದ ‘ನೀವು ಕರೆ ಮಾಡಿದ ಚಂದಾದಾರರು’ ಚಿತ್ರದಲ್ಲಿ ಕೆಳಮಧ್ಯಮ ವರ್ಗದ ಹುಡುಗಿಯ ಪೋಷಾಕು ಶಿಲ್ಪಾ ಅವರಿಗಿದೆ. ಸಮಾಜ ಮತ್ತು ಸರ್ಕಾರದ ನಡುವೆ ಸಿಲುಕುವ ಬಡ ಹೆಣ್ಣು ಮಗಳು ಸೌಲಭ್ಯಕ್ಕಾಗಿ ಏನೆಲ್ಲ ಮಾಡುತ್ತಾಳೆ, ಯಾವೆಲ್ಲ ಕಷ್ಟಗಳನ್ನು ಎದುರಿಸುತ್ತಾಳೆ ಎಂಬುದೇ ಅವರ ಪಾತ್ರವಂತೆ. ನನ್ನದು ಚೂರು ಡಾರ್ಕ್ ಸ್ಕಿನ್. ಅದನ್ನೇ ಇಟ್ಟುಕೊಂಡು, ಇಲ್ಲಿನ ನೇಟಿವಿಟಿಗೆ ನಿಮ್ಮ ಮುಖ ಹೊಂದುವುದಿಲ್ಲ. ನಿಮ್ಮನ್ನು ನೋಡಿದರೆ, ಪಕ್ಕದ್ಮನೆ ಹುಡುಗಿ ಎಂಬ ಫೀಲ್ ಆಗಲ್ಲ ಎಂದು ಅದೆಷ್ಟೋ ಮಂದಿ ಹೇಳಿದ್ದಾರೆ. ಅವರಿಗೆ ಉತ್ತರ ಭಾರತದ ಹುಡುಗಿಯ ಲುಕ್ ಬೇಕು. ಆದರೆ ಅದೇ ಪಕ್ಕದ ತಮಿಳಿನಲ್ಲಿ ಈ ರೀತಿ ನಡೆಯುವುದಿಲ್ಲ. | ಶಿಲ್ಪಾ ನಟಿ
Shilpa Manjunath Instagram – #KAALI 
trailer cut😊😊

Check out the latest gallery of Shilpa Manjunath