Nagabhushana N S Instagram – ಕೃಪಾಕರ ಸೇನಾನಿ ಅವರು ಕಂಡಂತೆ ಕುಂವೆಂಪು. ಒಂದು ‘ಚಿತ್ರ – ಕತೆ’. ತಮ್ಮ ಕ್ಯಾಮರಾದಲ್ಲಿ ಕುವೆಂಪು ಅವರನ್ನು ಸೆರೆಹಿಡಿದ ಚಿತ್ರಗಳ ಜೊತೆಗೆ ಮಹಾಕವಿಯ ಜೊತೆಗಿನ ಅನುಭವವನ್ನು ಹಂಚಿಕೊಂಡಿರುವ ಅಪರೂಪದ ಪುಸ್ತಕ ಈ “ಕುವೆಂಪು vs ಕ್ಯಾಮರಾ”. ನಮ್ಮ ನಾಡಿನ ಬಹುದೊಡ್ಡ ಮೇಧಾವಿ ಕುವೆಂಪು ಅವರ ಚಿಂತನೆಗಳನ್ನು ಇಂದಿನ ಪೀಳಿಗೆಗೆ ದಾಟಿಸುವ ಅವಶ್ಯಕತೆ ಇದೆ. ನಿಮ್ಮ ಮಕ್ಕಳಿಗೆ ಕುವೆಂಪು ಅವರನ್ನು ಚಿತ್ರಸಹಿತ ತಿಳಿಸಿಕೊಡಿ, ಆಮೂಲಕ ಕನ್ನಡದ ಮಹಾಕವಿಯನ್ನು ಪರಿಚಯಿಸಿ.
ನಮಗೆ ಗುರುಮಿತ್ರರಂತಿರುವ ಕೃಪಾಕರ ಸೇನಾನಿಯವರಿಂದ ಇಲ್ಲಿ ದಾಖಲಿಸಿರುವ ಎಷ್ಟೋ ಕತೆಗಳನ್ನು ಈಗಾಗಲೇ ಕೇಳಿದ್ದರೂ ಅದೇಕೋ ಓದುವಾಗ ಬೇರೆಯದೇ ದೃಷ್ಟಿಕೋನವಿದೆಯೇನೋ ಎಂಬಂತೆ. ಅದು ಅವರ ಬರವಣಿಗೆಯ ವೈಶಿಷ್ಟ್ಯ. ಕೊನೆಯಲ್ಲಿ ಜ಼ೆನ್ ತತ್ವ ದ ಬಗ್ಗೆ ಒಂದು ಅಧ್ಯಾಯವಿದೆ. ಹಾಗೆ ನೋಡಿದರೆ ಪ್ರತಿ ಅಧ್ಯಾಯವು ಒಂದು ಜ಼ೆನ್ ಕತೆಗಳು ಎನ್ನಬಹುದು.
ತಪ್ಪದೇ ಕೊಂಡುಓದಿ.
’ಕೃಪಾಕರ – ಸೇನಾನಿ’ ಅವರ
‘ಕ್ಯಾಮರಾ v/s ಕುವೆಂಪು’ ಪುಸ್ತಕ ನವಕರ್ನಾಟಕ, ಸಪ್ನ, ಆಕೃತಿ, ಅಂಕಿತ, ಅಮೂಲ್ಯ ಪುಸ್ತಕ ದ ಅಂಗಡಿಗಳಲ್ಲಿ ಮತ್ತು Amazon ನಲ್ಲಿ ಲಭ್ಯವಿದೆ.
ನೇರವಾಗಿ ತರಿಸಿಕೋಳ್ಳುವವರು 6364104578 ನಂಬರಿಗೆ ಸಂಪರ್ಕಿಸಿ.
#Kuvempu #KrupakarSenani | Posted on 29/Dec/2022 09:29:45