Nikhil Kumar

Nikhil Kumar Instagram – ಮಾನ್ಯ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸತತ 3ನೇ ಅವಧಿಗೆ ರಚನೆಯಾದ ಎನ್ ಡಿಎ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಕರುನಾಡಿನ ಸುಪುತ್ರರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು.

ಜಗತ್ತಿನ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುವ ಯಶಸ್ಸಿನ ಹಾದಿಯಲ್ಲಿರುವ ಭಾರತಕ್ಕೆ ಶ್ರೀ ನರೇಂದ್ರ ಮೋದಿ ಅವರ ಮೂಲಕ ಬಲಿಷ್ಠ ನಾಯಕತ್ವ ದೊರೆತಿದೆ. ಕಳೆದ ಹತ್ತು ವರ್ಷಗಳಲ್ಲಿ ನಾಗಾಲೋಟದಲ್ಲಿ ಮುನ್ನಡೆಸುತ್ತಿರುವ ಮೋದಿ ಅವರ 3.O ಸಂಪುಟದಲ್ಲಿ ಮಾನ್ಯ ಕುಮಾರಣ್ಣ ಅವರು ಮುಂಚೂಣಿಯಲ್ಲಿ ನಿಂತು ಜನಸೇವೆ ಮಾಡಲಿದ್ದಾರೆ. ಇದರಲ್ಲಿ ಯಾವ ಸಂಶಯವೂ ಇಲ್ಲ ಎನ್ನುವುದು ನನ್ನ ನಂಬಿಕೆ.

ರಾಷ್ಟ್ರಪತಿ ಭವನದ ಮುಂದೆ ನೆರೆಹೊರೆ ದೇಶಗಳ ನಾಯಕರ ಸಮಕ್ಷಮದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಈ ಮಹಾನ್ ಕ್ಷಣಕ್ಕೆ ಮೂಲ ಕಾರಣರಾದ ಮಂಡ್ಯ ಲೋಕಸಭೆ ಕ್ಷೇತ್ರದ ಮಹಾಜನತೆಗೆ ನನ್ನ ಶಿರಸಾಷ್ಟಾಂಗ ನಮನಗಳು ಹಾಗೂ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳ ಎಲ್ಲಾ ಮುಖಂಡರು, ಕಾರ್ಯಕರ್ತರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು.

#NDA #JDS #BJP | Posted on 10/Jun/2024 09:49:34

Nikhil Kumar
Nikhil Kumar

Check out the latest gallery of Nikhil Kumar