Ranjani Raghavan

Ranjani Raghavan Instagram – ಹುಟ್ಟುಹಬ್ಬದ ಶುಭಾಶಯಗಳು, ಅರೂರ್ ಸುಧಾಕರ್ ಶೆಟ್ಟಿ ಸರ್!
ಇವರು ನಮ್ಮ “ಡಿ ಡಿ ಢಿಕ್ಕಿ” ಸಿನಿಮಾದ ಕ್ಯಾಮೆರಾಮ್ಯಾನ್ ಅಂತ ನಿಮಗಾಗಲೇ ಗೊತ್ತಾಗಿರುತ್ತೆ, ಇವರು ರಾಷ್ಟ್ರೀಯ ಪುರಸ್ಕೃತ ಕ್ಯಾಮೆರಾಮ್ಯಾನ್ ಜಿ.ಎಸ್. ಭಾಸ್ಕರ್ ಅವರ ಶಿಷ್ಯರಾಗಿ ಕಲಿತು, Family Entertainer “ರಾಜಹಂಸ” (2017) Thriller movie “ಜೆಂಟಲ್‌ಮ್ಯಾನ್” (2020), Sports Drama “ಗುರು ಶಿಷ್ಯರು” (2022) ಚಿತ್ರಗಳಲ್ಲಿ ಕ್ಯಾಮೆರಾಮ್ಯಾನ್ ಆಗಿ ಗುರುತಿಸಿಕೊಂಡವರು.
ಇವ್ರು ಎಲ್ಲರಿಗಿಂತ ಸ್ಪೆಶಲ್ ಅನ್ನಿಸೋದು Technical knowledge ಒಂದರಿಂದ ಮಾತ್ರವಲ್ಲ, ಸಿನಿಮಾ ಸ್ಕ್ರಿಪ್ಟ್‌ಗಳನ್ನು ಅಂದಾಜು ಮಾಡೋ ಅಪೂರ್ವ ಸಾಮರ್ಥ್ಯದಿಂದ. ಸಿನಿಮಾದ ಬರವಣಿಗೆ ಸ್ವಲ್ಪ ಸರಿಹೋಗಲಿಲ್ಲ ಅಂದರೂ ಖಡಾಖಂಡಿತವಾಗಿ ಸಿನಿಮಾನೇ ರಿಜೆಕ್ಟ್ ಮಾಡಿಬಿಡ್ತಾರೆ. ಪ್ರೊಡ್ಯುಸರನ್ನ ಒಪ್ಪಿಸೋದಕಿಂತ ಇವರನ್ನ ಒಪ್ಪಿಸೋದು ಕಷ್ಟ! ಹಾಗಾಗಿ ನಮ್ಮ ಡಿಡಿ ಢಿಕ್ಕಿ ಸಿನಿಮಾ ಸಾಕಷ್ಟು ಬಾರಿ ತಿದ್ದುಪಡಿಯಾಗಿ ಒಳ್ಳೆ ರೂಪ ಪಡೆದಿದೆ ಅಂತ ಧೈರ್ಯವಾಗಿ ಹೇಳಬಹುದು.
ನನ್ನ ಮೊದಲ ಸಿನಿಮಾದಲ್ಲಿ ನಾಯಕಿಯಾಗಿ ಕ್ಯಾಮೆರಾದಲ್ಲಿ ಚಂದವಾಗಿ ತೋರಿಸಿದ ನೀವು ಈಗ ಮೊದಲ ನಿರ್ದೇಶನದಲ್ಲಿ ನಮ್ಮ ಕಥೆಯನ್ನ ಚಂದವಾಗಿ ತೋರಿಸೋದಕ್ಕೆ ಜೋತೆಯಾಗಿದ್ದೀರಿ. ನನ್ನ ಎರಡೂ ಪ್ರಯಾಣಗಳಲ್ಲಿ ಇಷ್ಟು ಮುಖ್ಯ ಪಾತ್ರ ವಹಿಸಿದ್ದಕ್ಕೆ ನಿಮಗೆ ತುಂಬಾ ಥ್ಯಾಂಕ್ಯು ಸರ್! ನಿಮ್ಮ ಅನುಭವ, ಸಲಹೆ ಮತ್ತು ಸ್ನೇಹದಿಂದ ನಮ್ಮ ಸಿನಿಮಾಗೆ ಹೆಚ್ಚು ವ್ಯಾಲ್ಯು ಆಡ್ ಆಗಿದೆ.
ನಿಮಗೆ ಇನ್ನಷ್ಟು ಯಶಸ್ಸು, ಆರೋಗ್ಯ ಮತ್ತು ಅನೇಕ ಸುಂದರ ಕಥೆಗಳನ್ನ ತೆರೆಮೇಲೆ ತರುವಂಥ ಅವಕಾಶಗಳು ದೊರೆಯಲಿ. ಮತ್ತೊಮ್ಮೆ ಹುಟ್ಟುಹಬ್ಬದ ಶುಭಾಶಯಗಳು
ಪ್ರೀತಿಯಿಂದ ರಂಜನಿ ರಾಘವನ್
ನಿರ್ದೇಶಕಿ, “ಡಿ ಡಿ ಢಿಕ್ಕಿ” | Posted on 29/Sep/2025 14:44:08

Ranjani Raghavan
Ranjani Raghavan

Check out the latest gallery of Ranjani Raghavan