Sumalatha Instagram – ಬೆಂಗಳೂರಿನ @ArtofLiving ಆಶ್ರಮದಲ್ಲಿ ಆಯೋಜಿಸಲಾದ ಜಾಗತಿಕ ಮಹಿಳಾ ಸಮಾವೇಶದಲ್ಲಿ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು, ರಾಜ್ಯಪಾಲರಾದ ಡಾ. @TCGEHLOT, ಶ್ರೀ ಶ್ರೀ @Gurudev, ಕೇಂದ್ರ ಸಚಿವರಾದ @ShobhaBJP, @Annapurna4BJP, ಸಂಸದರಾದ @dreamgirlhema ಹಾಗೂ @M_Lekhi ಸಹಿತ ಅನೇಕ ಗಣ್ಯರ ಉಪಸ್ಥಿತಿಯಲ್ಲಿ ಪಾಲ್ಗೊಂಡು, ಸ್ತ್ರೀ ಸಬಲೀಕರಣ ಹಾಗೂ ದೇಶದ ಅಭಿವೃದ್ಧಿಯ ಪಥದಲ್ಲಿ ನಾರಿ ಶಕ್ತಿಯ ಪಾತ್ರದ ಕುರಿತು ವಿಚಾರ ವಿನಿಮಯ ಮಾಡಿಕೊಳ್ಳಲಾಯಿತು.
ಸಮಾಜದ ವಿವಿಧ ವಲಯಗಳಲ್ಲಿ ಅನನ್ಯ ಕೊಡುಗೆ ನೀಡಿದ ಮಹಿಳೆಯರನ್ನು ಗುರುತಿಸಿ ವಿಶಾಲಾಕ್ಷಿ ಪ್ರಶಸ್ತಿ ನೀಡಿ ಗೌರವಿಸಿರುವುದು ಶ್ಲಾಘನೀಯ. ಚಲನಚಿತ್ರ ರಂಗಕ್ಕೆ ನೀಡಿದ ಕೊಡುಗೆ ಹಾಗೂ ಸಾರ್ವಜನಿಕ ಸೇವೆಗಾಗಿ ನನಗೆ ಈ ಪ್ರಶಸ್ತಿ ಲಭಿಸಿರುವುದಕ್ಕೆ ಆಭಾರಿಯಾಗಿದ್ದೇನೆ.
ದೇಶ ಗಡಿ ಕಾಯುವುದರಿಂದ ಹಿಡಿದು ವಿಜ್ಞಾನ, ಕ್ರೀಡೆ, ಸಂಸ್ಕೃತಿ, ರಾಜಕೀಯ ಸಹಿತ ಸಮಾಜದ ಎಲ್ಲಾ ಸ್ತರದ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿರುವ ಮಹಿಳೆಯರು ದೇಶವನ್ನು ಮುನ್ನಡೆಸುವ ಶಕ್ತಿಯನ್ನು ಹೊಂದಿದ್ದಾರೆ.Honoured to participate in the International Women’s Conference at the @ArtOfLiving Ashram, Bengaluru, alongside Hon’ble President Smt. Droupadi Murmu avaru, Hon’ble Governor Dr. @TCGEHLOT avaru, Sri Sri @Gurudev avaru, Union Ministers @ShobhaBJP avaru, @Annapurna4BJP avaru, MP @dreamgirlhema avaru, and @M_Lekhi avaru, among other esteemed dignitaries.
An insightful exchange on women empowerment and the pivotal role of #NariShakti in shaping the nation’s progress.
Truly humbled to receive the #Vishalakshi Award for my contributions to cinema and public service. Recognising and celebrating women’s contributions across diverse fields is a commendable initiative.
From guarding our borders to excelling in science, sports, culture, and politics, women continue to drive India forward with strength and determination! | Posted on 16/Feb/2025 17:42:08



