Ranjani Raghavan

Ranjani Raghavan Instagram – ಮಧುರೈ ಮೀನಾಕ್ಷೀ🌺

ಈ ದೇವಾಲಯದ ಇತಿಹಾಸ ನಿಮ್ಗೆ ಗೊತ್ತಾ?
ಇದು ಭಾರತದಲ್ಲಿಯೇ ಅತ್ಯಂತ ದೊಡ್ಡ ಮತ್ತು ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. ಸುಮಾರು 6 ನೇ ಶತಮಾನದ CE ಯಷ್ಟು ಹಿಂದಿನದು ಅಂತ ನಂಬ್ತಾರೆ. ಪ್ರಸ್ತುತ ರಚನೆಯನ್ನು ಹೆಚ್ಚಾಗಿ 16 ನೇ ಶತಮಾನದಲ್ಲಿ ನಾಯಕ್ ಆಡಳಿತಗಾರರ ಅಡಿಯಲ್ಲಿ ಪುನರ್ನಿರ್ಮಿಸಲಾಯಿತು.
ದೇವಾಲಯದ ಸಂಕೀರ್ಣವು ಅನೇಕ ವರ್ಣಚಿತ್ರಗಳು ಮತ್ತು ಶಿಲ್ಪಗಳಿಗೆ ನೆಲೆಯಾಗಿದೆ. “ಆಯಿರಾಮ್‌ಕಾಲ್ ಮಂಟಪ” ಅಥವಾ ಸಾವಿರ ಕಂಬಗಳ ಮಂಟಪ ಇಲ್ಲಿನ ವೈಶಿಷ್ಟ್ಯ.
ಈ ದೇವಾಲಯವು ಶಿವ ಮತ್ತು ಮೀನಾಕ್ಷಿ ದೇವಾಲಯಗಳನ್ನು ಸುತ್ತುವರೆದಿರುವ ಐದು ಬೃಹತ್ ದ್ವಾರಗಳನ್ನು ಹೊಂದಿದೆ. ಈ ದೇವಾಲಯವನ್ನು ಪಾಂಡ್ಯ ದೊರೆಗಳ ಮಗಳು ಮೀನಾಕ್ಷಿ ಮತ್ತು ಸುಂದರೇಶ್ವರರಾಗಿ ಮಧುರೈಗೆ ಬಂದ ಶಿವನ ವಿವಾಹವನ್ನು ಆಚರಿಸಲು ನಿರ್ಮಿಸಲಾಗಿದೆ.. Youtube vlog ಗಳಲ್ಲಿ ಇನ್ನಷ್ಟು details ಮತ್ತು interesting ಕಥೆ ನಿಮಗೆ ಗೊತ್ತಾಗುತ್ತದೆ, ನೋಡಿ 😊

pc #nanhudga | Posted on 18/Feb/2025 11:29:01

Ranjani Raghavan
Ranjani Raghavan

Check out the latest gallery of Ranjani Raghavan